ಅಪಾರ್ಟ್‌ಮೆಂಟ್‌ ಮಾಲೀಕರ ಹಕ್ಕುಗಳಿಗೆ ಹೊಸ ವಿಧೇಯಕ: 8ಕ್ಕೂ ಹೆಚ್ಚು ಫ್ಲ್ಯಾಟ್‌ಗಳ ಕಟ್ಟಡಗಳಿಗೆ ಅನ್ವಯ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಅಪಾರ್ಟ್‌ಮೆಂಟ್‌ ಮಾಲೀಕರ ಹಕ್ಕುಗಳಿಗೆ ಹೊಸ ವಿಧೇಯಕ: 8ಕ್ಕೂ ಹೆಚ್ಚು ಫ್ಲ್ಯಾಟ್‌ಗಳ ಕಟ್ಟಡಗಳಿಗೆ ಅನ್ವಯ

19 Aug 2026, 11:26 pm KANNADA SAKSHI

ಬೆಂಗಳೂರು: ರಾಜ್ಯದ ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ ಮತ್ತು ನಿರ್ವಹಣೆಗೆ ಸ್ಪಷ್ಟ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ‘ಕರ್ನಾಟಕ ಅಪಾರ್ಟ್‌ಮೆಂಟ್‌ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ-2026’ವನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಎಂಟು ಅಥವಾ ಅದಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ಗಳು ವಿಧೇಯಕದ ವ್ಯಾಪ್ತಿಗೆ ಬರಲಿದ್ದು, ಫ್ಲ್ಯಾಟ್‌ ಮಾಲೀಕರಿಗೆ ಮಾಲೀಕತ್ವದ ರಕ್ಷಣೆ, ಸಾಮಾನ್ಯ ಪ್ರದೇಶಗಳ ನಿರ್ವಹಣೆ, ಆಸ್ತಿಯ ಅನುವಂಶಿಕ ವರ್ಗಾವಣೆ ಹಾಗೂ ಕಟ್ಟಡಗಳ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳಿಗೆ ಕಾನೂನುಬದ್ಧ ಸ್ಪಷ್ಟತೆ ಸಿಗಲಿದೆ.

ವಿಧೇಯಕದಡಿ ಫ್ಲ್ಯಾಟ್‌ ಮಾಲೀಕರ ಸಂಘ ರಚನೆ, ಕಟ್ಟಡಗಳ ಸುರಕ್ಷತಾ ತಪಾಸಣೆ, ಮರು ಅಭಿವೃದ್ಧಿ ಹಾಗೂ ವಾಣಿಜ್ಯ ಪರಿಹಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸುವ ಡೆವಲಪರ್‌ಗಳಿಗೆ ಸಕ್ಷಮ ಪ್ರಾಧಿಕಾರವು ₹1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದ್ದು, ಉಲ್ಲಂಘನೆ ಮುಂದುವರಿದರೆ ಪ್ರತಿದಿನ ₹1,000ವರೆಗೆ ಹೆಚ್ಚುವರಿ ದಂಡ ವಿಧಿಸಲು ಅವಕಾಶವಿದೆ. ಡೆವಲಪರ್‌, ಸಂಘ ಅಥವಾ ಅಪಾರ್ಟ್‌ಮೆಂಟ್‌ ಮಾಲೀಕರು ಕೆಲವು ಉಪವಿಧಿಗಳನ್ನು ಉಲ್ಲಂಘಿಸಿದರೆ ₹20,000ವರೆಗೆ ದಂಡ ಹಾಗೂ ಮುಂದುವರಿದ ಉಲ್ಲಂಘನೆಗೆ ಪ್ರತಿದಿನ ₹1,000 ಹೆಚ್ಚುವರಿ ದಂಡ ವಿಧಿಸಬಹುದಾಗಿದೆ.

ಫ್ಲ್ಯಾಟ್‌ ಮಾಲೀಕರು ಸಂಘದ ಬೈಲಾಗಳನ್ನು ಪಾಲಿಸುವುದು, ಮಾಸಿಕ ನಿರ್ವಹಣಾ ಶುಲ್ಕ ಪಾವತಿಸುವುದು ಹಾಗೂ ಸಾಮಾನ್ಯ ಪ್ರದೇಶಗಳನ್ನು ಇತರರ ಹಕ್ಕಿಗೆ ಧಕ್ಕೆಯಾಗದಂತೆ ಬಳಸುವುದು ಕಡ್ಡಾಯವಾಗಲಿದೆ. ಕಟ್ಟಡದ ರಚನಾತ್ಮಕ ಸ್ಥಿರತೆ, ಸುರಕ್ಷತೆ ಅಥವಾ ಹೊರನೋಟಕ್ಕೆ ಧಕ್ಕೆಯಾಗುವ ಬದಲಾವಣೆಗಳನ್ನು ಪೂರ್ವಾನುಮತಿಯಿಲ್ಲದೆ ಮಾಡುವಂತಿಲ್ಲ. ಯೋಜನೆಯಲ್ಲಿನ ಬಹುಪಾಲು ಫ್ಲ್ಯಾಟ್‌ಗಳು ಹಂಚಿಕೆಯಾದ ದಿನಾಂಕದಿಂದ ಮೂರು ತಿಂಗಳೊಳಗೆ ಡೆವಲಪರ್‌ ಸಂಘ ರಚನೆ ಮತ್ತು ನೋಂದಣಿಗೆ ಅವಕಾಶ ಕಲ್ಪಿಸಬೇಕು. ಒಂದು ಪ್ರಾಜೆಕ್ಟ್‌ಗೆ ಒಂದು ನೋಂದಾಯಿತ ಸಂಘವಿದ್ದು, ಪ್ರತಿ ಫ್ಲ್ಯಾಟ್‌ದಾರರೂ ಸಂಘದ ಸದಸ್ಯರಾಗಬೇಕೆಂಬ ನಿಯಮವನ್ನು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS