ಸಿಎಂ ವಿಜಯ್ ವಿರುದ್ಧ ಹೇಳಿಕೆ: ಡಿಎಂಕೆ ಶಾಸಕ ಮಾರ್ಕಂಡೇಯನ್ ಬಂಧನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಮಾನಹಾನಿ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡೇಯನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲತ್ತೂರು ಕ್ಷೇತ್ರದ ಚುನಾವಣೆಯಲ್ಲಿ ಸೋತ ನಂತರ, ಸಿಎಂ ವಿಜಯ್ ಅವರು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಪರೋಕ್ಷವಾಗಿ ಟೀಕಿಸುವ ಸಂದರ್ಭದಲ್ಲಿ “ತಂದೆಯ ಹುಡುಕಾಟ” ಎಂಬ ಪದಪ್ರಯೋಗ ಬಳಸಿದ್ದರು ಎನ್ನಲಾಗಿದೆ. ಈ ಹೇಳಿಕೆಗೆ ಜುಲೈ 18ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸಕ ಮಾರ್ಕಂಡೇಯನ್ ಪ್ರತಿಕ್ರಿಯಿಸಿದ್ದರು.

ಮಾರ್ಕಂಡೇಯನ್ ಅವರ ಭಾಷಣದಲ್ಲಿನ ಕೆಲ ಹೇಳಿಕೆಗಳು ಮಾನಹಾನಿಕಾರಕ ಮತ್ತು ಬೆದರಿಕೆ ಸ್ವರೂಪದ್ದಾಗಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಈ ಘಟನೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS