ಬಾಲಿವುಡ್ ನಟಿ ಮೌನಿ ರಾಯ್ ಮುಂಬೈನಲ್ಲಿ ಪಾಪರಾಜಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರಿನೊಳಗೆ ಕುಳಿತಿದ್ದರೂ ನಿರಂತರವಾಗಿ ಕ್ಯಾಮೆರಾ ಹಿಡಿದು ಚಿತ್ರೀಕರಣ ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ ವಿರುದ್ಧ ಆಕ್ರೋಶಗೊಂಡ ಅವರು, “ವಿಡಿಯೋ ಮಾಡುವುದನ್ನು ನಿಲ್ಲಿಸಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್‌ನಿಂದ ತಮ್ಮ ಆಪ್ತ ಗೆಳತಿ ಹಾಗೂ ನಟಿ ಅನುಷಾ ದಾಂಡೇಕರ್ ಅವರೊಂದಿಗೆ ಹೊರಬಂದ ವೇಳೆ ಈ ಘಟನೆ ನಡೆದಿದೆ. ಕಾರಿನತ್ತ ತೆರಳುತ್ತಿದ್ದ ಮೌನಿ ರಾಯ್ ಅವರನ್ನು ಪಾಪರಾಜಿಗಳು ಸುತ್ತುವರಿದು ನಿರಂತರವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ನಡೆಸಿದ ಕಾರಣ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಖಾಸಗಿತನಕ್ಕೆ ಗೌರವ ನೀಡಬೇಕು ಎಂದು ಮೌನಿ ರಾಯ್ ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಸೆಲೆಬ್ರಿಟಿಗಳ ಜೀವನದಲ್ಲಿ ಇಂತಹ ಘಟನೆಗಳು ಸಾಮಾನ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.










