ಬೈ ಎಲೆಕ್ಷನ್ ಅಖಾಡದಲ್ಲಿ ಕುರುಡು ಕಾಂಚಾಣ – ಬಾಗಲಕೋಟೆಯಲ್ಲಿ 65.68%, ದಾವಣಗೆರೆಯಲ್ಲಿ 63.04% ಮತದಾನ..

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಯ (By Election) ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಸಂಜೆ 5 ಗಂಟೆ ವರೆಗೆ ಬಾಗಲಕೋಟೆಯಲ್ಲಿ 65.68% ಹಾಗೂ ದಾವಣಗೆರೆ ದಕ್ಷಿಣದಲ್ಲಿ 63.04% ರಷ್ಟು ಮತದಾನ ದಾಖಲಾಗಿದೆ.

 

ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪತ್ನಿಯೊಂದಿಗೆ ಆಗಮಿಸಿ ಬಾಗಲಕೋಟೆ ನಗರದ ಮತಗಟ್ಟೆ ಸಂಖ್ಯೆ 166 ರಲ್ಲಿ ಮತದಾನ ಮಾಡಿ, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮಸ್ಕಿಯಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ – ಭರ್ಜರಿ ಬ್ಯಾಟಿಂಗ್ ಮಾಡಿದ ಶ್ರೀರಾಮುಲು

 

By Poll 2

ಮತಗಟ್ಟೆಯೊಂದರಲ್ಲಿ ಮತದಾರರ ಪಟ್ಟಿಯಲ್ಲಿ ಮಗನ ಹೆಸರಿಗೆ ಮಾರ್ಕ್ ಮಾಡುವ ಬದಲು ತಂದೆ ಹೆಸರಿಗೆ ಮತಗಟ್ಟೆ ಸಿಬ್ಬಂದಿ ಮಾರ್ಕ್ ಮಾಡಿದ್ದು.. ಕೆಲಹೊತ್ತು ಗೊಂದಲ ಸೃಷ್ಟಿಸಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಬಿರುಸಿನ ಮತದಾನ ನಡೆಯಿತು. ಮತಗಟ್ಟೆ 66 ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಸರಿ ಮಾಡಿದ ಬಳಿಕ ವೋಟಿಂಗ್‌ಗೆ ಅವಕಾಶ ಕೊಡಲಾಯ್ತು.

 

ಎಂದಿನಂತೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಸದ್ದು ಮಾಡಿದೆ. ದಾವಣಗೆರೆಯ ಎಸ್‌ಪಿಎಸ್ ನಗರದಲ್ಲಿ ಬಹಿರಂಗವಾಗಿಯೇ ಕೈಯಲ್ಲಿ ಹಣ ಹಿಡಿದು ಹಂಚಿಕೆ ಕಾಂಗ್ರೆಸ್ ಕಾರ್ಯಕರ್ತರ ವಿಡಿಯೋ ವೈರಲ್ ಆಗಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS